ನೇತ್ರದಾನ ಮಾಡುವ ಪ್ರತಿಜ್ಞೆಗೈಯಲು, ಮಿಸ್ಡ್ ಕಾಲ್ ನೀಡಿ
ಡಾ. ರಾಜ್‌ಕುಮಾರ್ ನೇತ್ರ ಕೇಂದ್ರಕ್ಕೆ ತಮ್ಮ ಕಣ್ಣುಗಳನ್ನು ದಾನ ಮಾಡಿದ ಪುನೀತ್ ರಾಜ್ಕುಮಾರ್ ಅವರ ಗೌರವಾರ್ಥವಾಗಿ, ನಾರಾಯಣ ನೇತ್ರಾಲಯವು 29ನೇ ಡಿಸೆಂಬರ್ 2021ರಂದು ಹೊಸ ನೇತ್ರದಾನ ಉಪಕ್ರಮವನ್ನು ಪ್ರಾರಂಭಿಸಿತ್ತು.
ನೇತ್ರ ದಾನಿಯಾಗಲು ಸೈನ್ ಅಪ್ ಮಾಡಲು ಬಯಸುವ ಜನರು ಈಗ ಡಾ. ರಾಜ್‌ಕುಮಾರ್ ನೇತ್ರ ಕೇಂದ್ರದ ಮೀಸಲಾದ 91-8884018800 ಫೋನ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಸುಲಭವಾಗಿ ಪ್ರತಿಜ್ಞೆ ಮಾಡಬಹುದು. ನೀವು ಸ್ವೀಕರಿಸುವ ಸಂದೇಶದಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ, ನೇತ್ರದಾನದ ಪ್ರತಿಜ್ಞೆ ನಮೂನೆಯಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ ಮತ್ತು ಅದನ್ನು ಸಲ್ಲಿಸಿ. ನಿಮ್ಮನ್ನು ದೃಷ್ಟಿ ರಾಯಭಾರಿ ಎಂದು ಅಂಗೀಕರಿಸುವ ನೇತ್ರದಾನ ಪ್ರತಿಜ್ಞೆ ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡಿ.
ಈ ಉಪಕ್ರಮವು ಹೆಚ್ಚು ಜನರಿಗೆ ತಮ್ಮ ಕಣ್ಣುಗಳನ್ನು ಪ್ರತಿಜ್ಞೆಗೈಯಲು ಮತ್ತು ಕಾರ್ನಿಯಾದ ಕುರುಡುತನದಿಂದ ಜೀವನ ನಡೆಸುತ್ತಿರುವವರಿಗೆ ಬೆಳಕನ್ನು ನೀಡಲು ಸಹಾಯ ಮಾಡುತ್ತದೆ ಎಂದು ನಾರಾಯಣ ನೇತ್ರಾಲಯ ಆಶಿಸುತ್ತದೆ.
Give Missed call, pledge to donate eyes
In honour of Puneeth Rajkumar who donated his eyes to Dr. Rajkumar Eye Bank, Narayana Nethralaya launched a new eye donation initiative on 29th December 2021.
People who want to sign up to become an eye donor can now easily do so by giving a missed call to Dr. Rajkumar Eye Bank’s dedicated phone number
+91-8884018800. Click on the link in the message you receive, enter your details in the eye donation pledge form and submit it. Download the Eye Donation Pledge Certificate acknowledging you as a Sight Ambassador.
Narayana Nethralaya hopes that this initiative will make it easier for more people to pledge their eyes and bring light to those living with corneal blindness.
ನೇತ್ರದಾನ ಬದಲಾವಣೆಯನ್ನು ತರುತ್ತದೆ
Eye Donation Makes a Difference
"*" indicates required fields
ನೇತ್ರದಾನ ಮಾಡಲು ಸೂಚನೆಗಳು:
• ಸಾವು ಸಂಭವಿಸಿದ 4 ರಿಂದ 6 ತಾಸುಗಳ ಒಳಗೆ ನೇತ್ರದಾನ ಕೇಂದ್ರಕ್ಕೆ +91 9741685555 ಗೆ ದಯವಿಟ್ಟು ಕರೆ ಮಾಡಿ.
• ದಾನಿಯ ಕಣ್ಣುಗಳನ್ನು ಮುಚ್ಚಿ ಮತ್ತು ಮುಚ್ಚಿದ ಕಣ್ಣುಗಳ ಮೇಲೆ ಒದ್ದೆ ಹತ್ತಿಯ ಉಂಡೆಯನ್ನು ಇಡಿ.
• ಫ್ಯಾನ್‍ಗಳನ್ನು ಆರಿಸಿ ಮತ್ತು ಎಸಿ ಅಥವಾ ಕೂಲರ್ ಚಲಾಯಿಸಿ.
• ತಲೆಯನ್ನು ದಿಂಬಿನ ಸಹಾಯದಿಂದ ಎತ್ತರ ಮಾಡಿ.
INSTRUCTION FOR EYE DONATION
- Dial the Eye Bank (+91-9741685555, +91-80-66121641) within 6 hours of death.
- Close eyes of the donor and place wet cotton swab on closed eyes.
- Switch off the fans and keep the air-conditioner or cooler on.
- Raise the head with the help of a pillow.